ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲೇಜು ಪೋಷಕರ ಸಭೆಗೆ (PTM) ಹಾಜರಾಗಲು ‘ಅಪ್ಪ-ಅಮ್ಮ ಬಾಡಿಗೆಗೆ ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ರೆಡಿಟ್ನಲ್ಲಿ ಪೋಸ್ಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಕಲಿ ಪೋಷಕರಿಗೆ 15,000 ರೂ. ಸಂಭಾವನೆ ಮತ್ತು ಊಟದ ಆಫರ್ ನೀಡಿದ್ದು, ಈ ಕಿಲಾಡಿ ಬುದ್ಧಿಯಾತನ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗಿದೆ.