ಬಿಗ್ ಬಾಸ್ ಮನೆಯಲ್ಲಿ ನಡೆದ ರೋಚಕ ಟಾಸ್ಕ್‌ನಲ್ಲಿ ಯಶಸ್ ಅವರ ನಿಜವಾದ ಮುಖವಾಡ ಕಳಚುವಲ್ಲಿ ಇತರ ಸ್ಪರ್ಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಮನೆಯೊಳಗಿನ ಗುಳ್ಳೆನರಿ ಯಾರು ಎಂಬುದನ್ನು ಪತ್ತೆಹಚ್ಚುವ ಸವಾಲಿನಲ್ಲಿ ಮನೆಯವರು ಎಡವಿದ್ದು, ಯಶಸ್ ತಮ್ಮ ಚಾಣಾಕ್ಷ ಆಟದ ಮೂಲಕ ಎಲ್ಲರನ್ನೂ ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಈಗ ವೀಕ್ಷಕರ ಗಮನ ಸೆಳೆದಿದೆ.