ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ ಗ್ರಾಮಸ್ಥರು

×

ಮಳೆಗಾಗಿ ಕಪ್ಪೆಗಳ ಮದುವೆ ಮಾಡಿದ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀಲೇಗೌಡನ ಕೊಪ್ಪಲು ಗ್ರಾಮದಲ್ಲಿ ಬರಗಾಲದ ಭೀತಿ ಎದುರಾಗಿದ್ದು, ಮಳೆರಾಯನನ್ನು ಒಲಿಸಿಕೊಳ್ಳಲು ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿ ವಿಶಿಷ್ಟ ಪೂಜೆ ಸಲ್ಲಿಸಿದ್ದಾರೆ. ಮನೆ ಮನೆಗೂ ತೆರಳಿ ಜೋಡಿ ಕಪ್ಪೆಗಳಿಗೆ ಪೂಜೆ ಮಾಡಿ, ನೈವೇದ್ಯ ಅರ್ಪಿಸಲಾಗಿದ್ದು, ಮುಂದಿನ 9 ದಿನಗಳ ಒಳಗಾಗಿ ಭಾರಿ ಮಳೆ ಸುರಿಯಲಿದೆ ಎಂಬ ಬಲವಾದ ನಂಬಿಕೆಯನ್ನು ಸ್ಥಳೀಯ ರೈತರು ವ್ಯಕ್ತಪಡಿಸಿದ್ದಾರೆ.

Bhavana Hegde