ಬೆಂಗಳೂರಿನ ಏರ್ಪೋರ್ಟ್ನಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದರು. ಆ ಸಂದರ್ಭ ಗುಟ್ಟಾಗಿ ಮಾತನಾಡಿದ್ದಾರೆ ಎನ್ನಲಾದ ಫೋಟೊ ವೈರಲ್ ಆಗಿತ್ತು. ಆ ಕುರಿತು ಸಿದ್ದರಾಮಯ್ಯ ಈಗ ಸ್ಪಷ್ಟನೆ ನೀಡಿದ್ದು, ‘ನಾನು ಹಾಗೂ ಮೋದಿ ಗುಟ್ಟಾಗಿ ಏನು ಮಾತನಾಡಿಲ್ಲ’ ಎಂದಿದ್ದಾರೆ. ಮೋದಿಯವರು ‘ಮಹಿಳಾ ಮೀಸಲಾತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು’ ಎಂದು ಕೇಳಿದರು. ‘ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ’ ಎಂದು ಉತ್ತರಿಸಿದೆ ಅಷ್ಟೇ, ಅದರಲ್ಲಿ ಬೇರೇನಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.