ಇರಾನ್ ಯುದ್ಧದ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುತ್ತಿಗೆ ಮೇಲೆ ಕೆಂಪು ಗಾಯ ಕಾಣಿಸಿಕೊಂಡಿದ್ದು, ಅವರ ಆರೋಗ್ಯದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಶ್ವೇತಭವನವು ಇದು ಸ್ಕಿನ್ ಕ್ರೀಮ್ನಿಂದಾದ ಗಾಯ ಎಂದು ಸ್ಪಷ್ಟಪಡಿಸಿದೆ. ಆದರೆ, ಯಾವ ಆರೋಗ್ಯ ಸಮಸ್ಯೆಗೆ ಈ ಕ್ರೀಮ್ ಬಳಸಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲ.