ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಾದ್ಯಂತ ವಾಸಿಸುತ್ತಿರುವ ಭಾರತೀಯ ಸಮುದಾಯಕ್ಕೆ ಹಬ್ಬದ ಶುಭಾಶಯ ಕೋರಲು ದುಬೈನ ಜಗತ್ಪ್ರಸಿದ್ಧ ‘ಬುರ್ಜ್ ಖಲೀಫಾ’ ಕಟ್ಟಡವು ವಿಶೇಷ ಬೆಳಕಿನ ಪ್ರದರ್ಶನದೊಂದಿಗೆ ಕಂಗೊಳಿಸಿದೆ. ವಿಶ್ವದ ಅತ್ಯಂತ ಎತ್ತರದ ಈ ಕಟ್ಟಡದ ಮೇಲೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 'ಹ್ಯಾಪಿ ದೀಪಾವಳಿ' ಎಂಬ ಸಾಲುಗಳನ್ನು ಡಿಜಿಟಲ್ ದೃಶ್ಯಾವಳಿಗಳೊಂದಿಗೆ ಪ್ರದರ್ಶಿಸಲಾಯಿತು.