ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ 75 ವರ್ಷದ ದಿನಗೂಲಿ ಕಾರ್ಮಿಕ ದುಲಿಚಂದ್ ಅವರಿಗೆ ಒಂದೇ ಬಲ್ಬ್ ಇರುವ ಗುಡಿಸಲಿಗೆ 1.39 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದ್ದು ಆಘಾತಕಾರಿಯಾಗಿದೆ. ಅಧಿಕೃತ ಸಂಪರ್ಕವೇ ಇಲ್ಲವೆಂದು ವೃದ್ಧ ಆರೋಪಿಸಿದ್ದು, ಬಿಲ್ ಪಾವತಿಸದಿದ್ದರೆ ಜೈಲು ಶಿಕ್ಷೆಯ ಬೆದರಿಕೆಯನ್ನೂ ಎದುರಿಸುತ್ತಿದ್ದಾರೆ. ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.