ಚಿತ್ರದುರ್ಗ, ನವೆಂಬರ್ 03: MLC ಚುನಾವಣೆ ಮೇಲೆ ಸ್ಟಿಂಗ್ ಇಂಪ್ಯಾಕ್ಟ್ ಎಂಬ ಕೆ.ಎನ್.ರಾಜಣ್ಣ ಹೇಳಿಕೆಗೆ ಸಚಿವ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ರಾಜಣ್ಣ, ಅವರ ಮಗ ಎಂಎಲ್ಸಿ ಚುನಾವಣೆ ಮಾಡಿಲ್ಲ. ಮತ ಹಾಕಿಸಿದ್ದಾಗಿ ಕೆ.ಎನ್.ರಾಜಣ್ಣ ಎದೆ ಮುಟ್ಟಿಕೊಂಡು ಹೇಳಲಿ. ಯಾವ ದೇಗುಲಕ್ಕೆ ಬರ್ತಾರೆ ಬರಲಿ, ನಾನು ಬರುತ್ತೇನೆ. ಪಕ್ಷ ವಿರೋಧಿಗಳನ್ನು ಮೊದಲು ಪಕ್ಷದಿಂದ ಹೊರ ಹಾಕಬೇಕು. ರಾಜಣ್ಣ ಪಕ್ಷದಲ್ಲಿದ್ದುಕೊಂಡು ಹೀಗೆ ಮಾಡಬಾರದು ಎಂದವರು ಹೇಳಿದ್ದಾರೆ.