ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದ ಬಳಿ ಮದಗಜಗಳ ನಡುವೆ ಭೀಕರ ಕಾಳಗ ನಡೆದಿದೆ. ಮದಗಜಗಳು ಕಾದಾಡುವ ವೇಳೆ ಎಂಟ್ರಿಕೊಟ್ಟ ನಾಯಿ, ಬೊಗಳುತ್ತಾ ಕಾಡಾನೆಗಳ ಸುತ್ತ ಓಡಾಡಿದೆ. ಈ ವೇಳೆ ಕಾದಾಟ ನಿಲ್ಲಿಸಿ ನಾಯಿ ಕಡೆಗೆ ನುಗ್ಗಿ ಸಲಗಗಳು ಆರ್ಭಟಿಸಿದ್ದು, ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಕಾಡಾನೆಗಳನ್ನು ಬೇರ್ಪಡಿಸಲು ಇಟಿಎಫ್ ಸಿಬ್ಬಂದಿ ಕೂಡ ಹರಸಾಹಪಟ್ಟಿದ್ದಾರೆ.