ವೈನ್ ಶಾಪ್ನಲ್ಲಿ ಕೂಲಿ ಮಾಡುತ್ತಿದ್ದವರು ಈಗ ವಿಧಾನ ಪರಿಷತ್ ಸದಸ್ಯ! ಕೆಲ ವರ್ಷಗಳ ಕಾಲ ಹಿರಿಯೂರಿನ ವೈನ್ ಶಾಪ್ನಲ್ಲಿ ಕೂಲಿ ಆಗಿದ್ದ ಆಗ್ನೆಯ ಪದವೀಧರ ಕ್ಷೇತ್ರದ ವಿಜೇತ ಅಭ್ಯರ್ಥಿ ಕೆಎಂ ಸುರೇಶ್ ಸದ್ಯ ದಾವಣಗೆರೆಯ ಸೋಮೇಶ್ವರ ವಿದ್ಯಾಸಂಸ್ಥೆ, ಸೋಮೇಶ್ವರ ಆಸ್ಪತ್ರೆ ಮಾಲೀಕರಾಗಿದ್ದಾರೆ. ಸೋಮೇಶ್ವರ ಸುರೇಶ್ ಎಂದೇ ದಾವಣಗೆರೆಯಲ್ಲಿ ಚಿರಪರಿಚಿತ ಕೆಎಂ ಸುರೇಶ್, ಮಹಾನಗರ ಪಾಲಿಕೆ ಚುನಾವಣೆಗೆ ನಿಂತು ಸೋತಿದ್ದರು. ಸದ್ಯ ಅವರಿಗೆ ವಿಧಾನ ಪರಿಷತ್ ಸ್ಥಾನ ಒಲಿದಿದೆ.