ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರಿ ಮಳೆಯಿಂದಾಗಿ ಭೀಕರ ಹಠಾತ್ ಪ್ರವಾಹ ಮತ್ತು ಮಣ್ಣಿನ ಕುಸಿತ ಸಂಭವಿಸಿದ್ದು, ದೇಶಾದ್ಯಂತ ಕನಿಷ್ಠ 24 ಜನರು ಮೃತಪಟ್ಟಿದ್ದಾರೆ ಹಾಗೂ ಅನೇಕರು ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರಕೃತಿ ವಿಕೋಪದ ನಡುವೆ, ಸರ್ಕಾರಿ ಬಂಗಲೆಯೊಂದು ಕುಸಿದು ಕಾಳಿ ಗಂಡಕಿ ನದಿಗೆ ಬಿದ್ದಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.