ಮೈಸೂರಿನ ಚಾಮುಂಡಿಬೆಟ್ಟಕ್ಕೆ ರಾಜ್ಯಪಾಲೆ ಸುಧಾ ಯಾದವ್ ಭೇಟಿ ನೀಡಿದ್ದು, ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯಪಾಲೆ ಸುಧಾ ಯಾದವ್ಗೆ ಚಾಮುಂಡೇಶ್ವರಿ ದೇವಿಯ ಭಾವಚಿತ್ರ, ಗಣಪತಿ ವಿಗ್ರಹ ನೀಡಿ ದೇವಸ್ಥಾನದ ವತಿಯಿಂದ ಗೌರವ ಸಮರ್ಪಣೆ ಮಾಡಲಾಗಿದೆ. ಡಾ.ಸುಧಾ ಗವರ್ನರ್ ಆದ ನಂತರ ಮೊದಲ ಬಾರಿಗೆ ಮೈಸೂರಿಗೆ ತೆರಳಿದ್ದು, ಸುತ್ತೂರು ಶಾಖಾ ಮಠಕ್ಕೂ ಭೇಟಿ ನೀಡಿ, ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ.