ಬರಗಾಲದಲ್ಲೂ ಉಕ್ಕಿದ ಗಂಗೆ! 265 ಅಡಿಯಲ್ಲೇ ಭರ್ಜರಿ ನೀರು

×

ಬರಗಾಲದಲ್ಲೂ ಉಕ್ಕಿದ ಗಂಗೆ! 265 ಅಡಿಯಲ್ಲೇ ಭರ್ಜರಿ ನೀರು

ದಾವಣಗೆರೆ ಜಿಲ್ಲೆಯಾದ್ಯಂತ ಬರದ ಛಾಯೆ ಆವರಿಸಿ, ಒಂದು ಸಾವಿರ ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿಯ ನಡುವೆ ರೈತರೊಬ್ಬರ ಜಮೀನಿನಲ್ಲಿ ಪವಾಡವೊಂದು ನಡೆದಿದೆ. ದಾವಣಗೆರೆ ತಾಲೂಕಿನ ವಡ್ಲಹಳ್ಳಿ ಗ್ರಾಮದ ಸಂತೋಷ್ ಎಂಬ ರೈತನ ಜಮೀನಿನಲ್ಲಿ ಕೇವಲ 265 ಅಡಿ ಆಳಕ್ಕೆ ಭರಪೂರ ಅಂತರ್ಜಲ ಉಕ್ಕಿ ಬಂದಿದೆ. ಬರಗಾಲದಲ್ಲೂ ರಭಸವಾಗಿ ಗಂಗೆ ಪ್ರತ್ಯಕ್ಷಳಾಗಿರುವುದನ್ನು ಕಂಡು ರೈತ ಸಂತೋಷ್ ಹಾಗೂ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.

Basavaraj Doddamani