ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಶಿವಪುರ ಗ್ರಾಮದ ನಿಂಗಪ್ಪ ದಳಪತಿ ಎಂಬ ರೈತನ ಹೊಲದಲ್ಲಿ ಬೋರ್‌ವೆಲ್ ಕೊರೆಸುತ್ತಿದ್ದಂತೆ ಅಂತರ್ಜಲ ಉಕ್ಕಿ ಬಂದು ಬಾನಿನೆತ್ತರಕ್ಕೆ ಚಿಮ್ಮಿದೆ. ಭೀಕರ ಬರದ ಆತಂಕದ ನಡುವೆಯೂ ನೀರು ರಭಸವಾಗಿ ಹರಿದು ಬಂದ ದೃಶ್ಯ ಕಂಡು ರೈತ ಹಾಗೂ ಸ್ಥಳೀಯರಲ್ಲಿ ಸಂತಸ ಮನೆಮಾಡಿದೆ.