ಹಾಸನಾಂಬ ದರ್ಶನೋತ್ಸವವು ಭಕ್ತರಿಂದ ಭಾರೀ ಪ್ರತಿಕ್ರಿಯೆ ಪಡೆದಿದೆ. ಕಳೆದ 12 ದಿನಗಳಲ್ಲಿ 30.07 ಲಕ್ಷ ಭಕ್ತರು ದರ್ಶನ ಪಡೆದಿದ್ದು, ದೇಗುಲಕ್ಕೆ ಒಟ್ಟು 25.60 ಕೋಟಿ ರೂ. ಆದಾಯ ಹರಿದುಬಂದಿದೆ. ₹1000, ₹300 ಟಿಕೆಟ್ಗಳ ಮಾರಾಟ, ಲಾಡು ಹಾಗೂ ಆನ್ಲೈನ್ ಟಿಕೆಟ್ಗಳಿಂದ ಈ ಆದಾಯ ಸಂಗ್ರಹವಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ. ದರ್ಶನೋತ್ಸವ ಮುಕ್ತಾಯಗೊಂಡಿದೆ.