ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನೋತ್ಸವದ ನಾಲ್ಕನೇ ದಿನವೂ ಸಾರ್ವಜನಿಕರು ಹಾಗೂ ಗಣ್ಯರು ಹರಿದುಬರುತ್ತಿದ್ದು, ವಿಶೇಷ ದರ್ಶನದ ಸಾಲಿನಲ್ಲಿ ಭಕ್ತಸಾಗರವೇ ನೆರೆದಿದೆ. ದರ್ಶನಕ್ಕೆ ಸಮಯ ವಿಳಂಬವಾದರೂ ಭಕ್ತರು ಶಾಂತಿಯಿಂದ ದೇವಿಯ ದರ್ಶನ ಪಡೆಯುತ್ತಿದ್ದು, ಕಳೆದ ಮೂರೇ ದಿನಗಳಲ್ಲಿ ಟಿಕೆಟ್ ಹಾಗೂ ಪ್ರಸಾದ ಮಾರಾಟದಿಂದ ದೇವಾಲಯಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.