ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಸ್ವವನಿಧಿ ಘಾಟ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೆಡ್ಕಾನ್ಸ್ಟೇಬಲ್ ಪುಂಡಲೀಕ ಹಟ್ಟಿ (50) ಮತ್ತು ಅವರ ಪುತ್ರಿ ನಿಖಿತಾ ಹಟ್ಟಿ (24) ದುರ್ಮರಣಕ್ಕೀಡಾಗಿದ್ದಾರೆ. ನಿಪ್ಪಾಣಿ ಟೌನ್ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಪುಂಡಲೀಕ ಹಟ್ಟಿ ಅವರು ತಮ್ಮ ಪುತ್ರಿ ನಿಖಿತಾ ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.