ವಿಜಯಪುರ: ಜಿಲ್ಲೆಯ ಬಂದಾಳ ಗ್ರಾಮದಲ್ಲಿ 11 ನೇ ದಿನ ಗಣೇಶನ ವಿಸರ್ಜನೆ ವೇಳೆ ಯುವಕನೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಪ್ರಶಾಂತ ಬಿರಾದಾರ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿ ಪುಂಡತನ ಮೆರೆದಿದ್ದಾನೆ. ಪರವಾನಿಗೆ ಹೊಂದಿದ್ದ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಶಾಂತ್ನನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ.