ಒಮಾನ್ ಕರಾವಳಿಯ ಸಮೀಪ ಭಾರತೀಯ ಧ್ವಜ ಹೊಂದಿದ್ದ ಸರಕು ನೌಕೆಯ ಮೇಲೆ ನಡೆದ ಡ್ರೋನ ದಾಳಿಯಲ್ಲಿ ಗುಜರಾತ್ ಮೂಲದ ಭಾರತೀಯ ನಾವಿಕರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ನೌಕೆಯಲ್ಲಿದ್ದ ಉಳಿದ 13 ಭಾರತೀಯ ಸಿಬ್ಬಂದಿಯನ್ನು ಒಮಾನ್ ಕರಾವಳಿ ಭದ್ರತಾ ಪಡೆ ಯಶಸ್ವಿಯಾಗಿ ರಕ್ಷಿಸಿದೆ. ಈ ಘಟನೆಯನ್ನು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಮೃತಪಟ್ಟ ನಾವಿಕನನ್ನು ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂದು ಗುರುತಿಸಲಾಗಿದೆ.