ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಐಎನ್‌ಎಸ್ ಸಮರ್ಥಕ್ ಯುದ್ಧ ನೌಕೆಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಕಾರವಾರ ನೌಕಾ ನೆಲೆಯಲ್ಲಿ ಸಮರ್ಪಣೆಯಾದ ಈ ನೌಕೆಯನ್ನು ಲಾರ್ಸನ್ ಅಂಡ್ ಟೂಬ್ರೊ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಿಸಿದೆ. ಕಣ್ಗಾವಲು, ಗಸ್ತು ಹಾಗೂ ಮಾನವೀಯ ನೆರವು ಮಿಷನ್‌ಗಳಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.