ಕರ್ನಾಟಕದಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್) ಇ-ಕೆವೈಸಿ ಮಾಡಿಸುವುದಕ್ಕೆ ನವೆಂಬರ್ 10ನೇ ತಾರೀಕು ಅಂತಿಮ ದಿನವಾಗಿದ್ದು, ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಒಟ್ಟು 41,33,529 ಲಕ್ಷ ಜನರ ಇ-ಕೆವೈಸಿ ಇನ್ನೂ ಬಾಕಿ ಉಳಿದಿದೆ. ಪಡಿತರ ಕಡಿತಗೊಳ್ಳುವುದನ್ನು ತಪ್ಪಿಸಲು ಸಾರ್ವಜನಿಕರು ‘ಅನ್ನಸೇವೆ’ ಮೊಬೈಲ್ ಆಪ್ ಮೂಲಕ ಅಥವಾ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ನವೆಂಬರ್ 10ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಪಡಿತರ ರದ್ದಾಗುವ ಅಥವಾ ಅಮಾನತುಗೊಳ್ಳುವ ಸಾಧ್ಯತೆಯಿದೆ.