ಬೆಂಗಳೂರು: ಜೆಡಿಎಸ್ ಸೇರುವ ಕುರಿತ ವದಂತಿಗಳಿಗೆ ಮಾಜಿ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ತಾವು ಯಾಕೆ ಜೆಡಿಎಸ್ಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಆ ಬಗ್ಗೆ ಸಚಿವ ಹೆಚ್.ಸಿ. ಬಾಲಕೃಷ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಅವನು ಬಾಲಕೃಷ್ಣ ಕೃಷ್ಣ ಅಲ್ಲ, ಬರೀ ಬಾಲವಾಗಿದ್ದು, ಬಾಲಕ್ಕೆ ಉತ್ತರ ನೀಡಲು ಹೋಗುವುದಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.