ಶಬರಿಮಲೆಗೆ ಹೋಗುವ ಭಕ್ತರಿಗೆ ಕೆಎಸ್‌ಆರ್‌ಟಿಸಿ ಶುಭಸುದ್ದಿ ನೀಡಿದೆ. ಬೆಂಗಳೂರಿನ ಶಾಂತಿನಗರದಿಂದ ನಿಲಕ್ಕಲ್‌ಗೆ (ಪಂಪಾ ಶಬರಿಮಲೆ) ಐರಾವತ ಪ್ರೇಮೋ ಬಸ್ ಸಂಚಾರ ಆರಂಭಿಸಿದೆ. ಬೆಂಗಳೂರಿನಿಂದ 1980 ರೂಪಾಯಿ, ಮೈಸೂರಿನಿಂದ 1880 ರೂಪಾಯಿ ಟಿಕೆಟ್ ದರವಿದ್ದು, ಈ ಹೊಸ ಸೇವೆಯು ಅಯ್ಯಪ್ಪ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ.