ಶಿರಾಡಿಘಾಟ್ ರಸ್ತೆಯಲ್ಲಿ ಮರ ತುಂಬಿದ್ದ ಲಾರಿ ಪಲ್ಟಿ, ಫುಲ್ ಟ್ರಾಫಿಕ್ ಜಾಮ್

×

ಶಿರಾಡಿಘಾಟ್ ರಸ್ತೆಯಲ್ಲಿ ಮರ ತುಂಬಿದ್ದ ಲಾರಿ ಪಲ್ಟಿ, ಫುಲ್ ಟ್ರಾಫಿಕ್ ಜಾಮ್

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ಶಿರಾಡಿಘಾಟ್ ರಸ್ತೆಯಲ್ಲಿ ರಸ್ತೆ ಮಧ್ಯೆಯೇ ಮರ ತುಂಬಿದ್ದ ಲಾರಿ ಪಲ್ಟಿಯಾಗಿದ್ದು ಟ್ರಾಫಿಕ್ ಜಾಮ್​ ಉಂಟಾಗಿದೆ. ಟ್ರಾಫಿಕ್​ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಯನ್ನು ಕ್ಲಿಯರ್ ಮಾಡುತ್ತಿದ್ದಾರೆ.

Manjunath KB