ಬೆಂಗಳೂರಿನ ಗುಜರಿ ವ್ಯಾಪಾರಿಗೆ ನಕಲಿ ಹಣ ನೀಡಿ ವಂಚಿಸಲು ಯತ್ನಿಸಿದ್ದು ಪ್ರಯತ್ನ ವಿಫಲವಾಗಿದೆ.ಬೆಂಗಳೂರಿನಿಂದ ದೆಹಲಿಗೆ ಗುಜರಿ ವಸ್ತುಗಳನ್ನು ಕಳಿಸುವ ಬ್ಯುಸಿನೆಸ್ ಮಾಡುವ ಕಾಟನ್ ಪೇಟೆ ಗುಜರಿ ವ್ಯಾಪಾರಿ ಕಾರ್ತಿಕ್ ಎಂಬುವವರಿಗೆ ಭರತ್ ಎಂಬಾತ ಕರೆ ಮಾಡಿ ನನಗೆ ದೆಹಲಿಯಲ್ಲಿ 20 ಲಕ್ಷ ಹಣ ತುರ್ತಾಗಿ ಬೇಕಾಗಿದೆ. ನಿಮಗೆ ಬೆಂಗಳೂರಿನಲ್ಲಿ ನಮ್ಮ ಕಡೆಯವರು 20 ಲಕ್ಷ ಕೊಡ್ತಾರೆ ಅದನ್ನ ಪಡೆದು ದೆಹಲಿಯಲ್ಲಿ ನಿಮಗೆ ಪರಿಚಯದವರ ಕಡೆಯಿಂದ ನನಗೆ 20 ಲಕ್ಷ ಹಣ ಕೊಡಿಸಿ ಎಂದು ಹೇಳಿದ್ದ. ಅದರಂತೆ ಭರತ್ ಕಡೆಯ ರಮಾಕಾಂತ್ ಎಂಬಾತ 20 ಲಕ್ಷ ಹಣ ಪಡೆಯಲು ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ತೆರಳಿದ್ದ.
ಕಾರ್ತಿಕ್ ಸಹಚರ ರಮಾಕಾಂತ್ 500 ಮುಖಬೆಲೆಯ ಹತ್ತು ಬಂಡಲ್ ನೀಡಿದ್ದು ಬಂಡಲ್ ನ ಮೇಲಿನ ಹಾಗೂ ಕೆಳಗಿನ ನೋಟು ಮಾತ್ರ ಅಸಲಿಯಾಗಿದ್ದು ಒಳಗಿನ ಎಲ್ಲ ನೋಟು ವೈಟ್ ಪೇಪರ್ ಇಡಲಾಗಿತ್ತು. 500 ರೂ ಅಸಲಿ ನೋಟನ್ನು ಹೋಲುವಂತೆ ವೈಟ್ ಪೇಪರ್ ನಾಲ್ಕು ಅಂಚಿನಲ್ಲಿ ನಕಲಿ ನೋಟಿನಂತೆ ಪ್ರಿಂಟ್ ಮಾಡಿದ್ರು. ಬಂಡೆಲ್ ಓಪನ್ ಮಾಡಲು ಬಿಡದಂತೆ ಪದೇ ಪದೇ ದೆಹಲಿಗೆ ಕರೆ ಮಾಡಿ ಹಣ ನೀಡುವಂತೆ ರಮಾಕಾಂತ್ ಒತ್ತಡ ಹಾಕಿದ್ದ. ಅನುಮಾನ ಬಂದು ಬಂಡಲ್ ಓಪನ್ ಮಾಡ್ತಿದ್ದಂತೆ ಇಬ್ಬರು ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಗುಜರಿ ವ್ಯಾಪಾರಿ ಕಾರ್ತಿಕ್ರಿಂದ ಭರತ್ ಹಾಗೂ ರಮಾನಂತ್ ಸೇರಿ ಮತ್ತೊರ್ವ ವ್ಯಕ್ತಿ ವಿರುದ್ದ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.