ದೇಶದ ಎಕ್ಸ್ಪ್ರೆಸ್ವೇಗಳಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ನಿಗದಿತ ವೇಗಕ್ಕಿಂತ ಶೇ 20ರಷ್ಟು ಹೆಚ್ಚಿನ ವೇಗದಲ್ಲಿ (ಅಂದರೆ ಗಂಟೆಗೆ 144 ಕಿ.ಮೀ ವರೆಗೆ) ಚಲಿಸುವವರಿಗೂ ಯಾವುದೇ ಅತಿವೇಗದ ದಂಡ ಅಥವಾ ಅನಗತ್ಯ ನೋಟೀಸ್ ವಿಧಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಚಾಲಕರಿಗೆ ಬರುತ್ತಿರುವ ನೋಟಿಸ್ಗಳ ಬಗ್ಗೆ ಸ್ಪಷ್ಟನೆ ನೀಡುತ್ತಾ ಅವರು ಈ ಮಾತುಗಳನ್ನಾಡಿದ್ದಾರೆ.