ಸೋಶಿಯಲ್ ಮೀಡಿಯಾ ಹುಚ್ಚಾಟಕ್ಕೆ ಹಿರಿಯರು ಯಾವ ಮಟ್ಟಿಗೆ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯೆಂಬಂತೆ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಕಡಲತೀರದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಬ್ಯುಸಿಯಾಗಿದ್ದ ಪೋಷಕರು ತಮ್ಮ ಪುಟ್ಟ ಮಗುವನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ, ಮಗು ಸಮುದ್ರದ ಬೃಹತ್ ಅಲೆಗಳ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುವುದರಲ್ಲಿತ್ತು. ಆದರೆ, ಬೇರೊಬ್ಬನ ಸಮಯಪ್ರಜ್ಞೆಯಿಂದ ಆ ಮಗು ಪಾರಾಗಿರುವ ರೋಚಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.