ಭಾರತೀಯ ಜನಸಂಘದ ಪ್ರಮುಖ ಸಿದ್ಧಾಂತಕಾರ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆಯ ಪ್ರಯುಕ್ತ ನವದೆಹಲಿಯ 'ದೀನ್ ದಯಾಳ್ ಉಪಾಧ್ಯಾಯ ಪಾರ್ಕ್'ನಲ್ಲಿ ಆಯೋಜಿಸಲಾಗಿದ್ದ ನೂತನ ಶೈಲಿಯ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡರು. ಇಂದಿನ ಯುವ ಪೀಳಿಗೆಗೆ ಸಾಂಪ್ರದಾಯಿಕ ಭಜನೆ ಮತ್ತು ಆಧುನಿಕ ಸಂಗೀತದ ಸಂಯೋಜನೆಯನ್ನು ಪರಿಚಯಿಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಯುವಜನರೊಂದಿಗೆ ಬೆರೆತರು.