ವಾರಣಾಸಿಯ ನಮೋ ಘಾಟ್ನಲ್ಲಿ ವಾಯುಪಡೆ ದಿನದ ಭವ್ಯ ಏರ್ ಶೋದಲ್ಲಿ 'ವಿಂಗ್ಸ್ ಓವರ್ ಗಂಗಾ' ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ವೈರಲ್ ಆಗಿದೆ. ಭಾರತೀಯ ವಾಯುಪಡೆಯು (IAF) ತನ್ನ 94ನೇ ಸಂಸ್ಥಾಪನಾ ದಿನಾಚರಣೆಯ ಮುನ್ನಾದಿನದಂಗವಾಗಿ ಪವಿತ್ರ ವಾರಣಾಸಿಯ ಐತಿಹಾಸಿಕ ನಮೋ ಘಾಟ್ನಲ್ಲಿ 'ಏರ್ ಫೋರ್ಸ್ ಡೇ ಏರಿಯಲ್ ಡಿಸ್ಪ್ಲೇ-2026' ಭವ್ಯ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿತ್ತು. 'ವಿಂಗ್ಸ್ ಓವರ್ ಗಂಗಾ' (Wings over Ganges) ಎಂಬ ಪ್ರೇರಣಾದಾಯಕ್ ಥೀಮ್ ಅಡಿಯಲ್ಲಿ ನಡೆದ ಈ ರೋಮಾಂಚಕಾರಿ ಸಾಹಸ ಪ್ರದರ್ಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕ್ಷಿಯಾದರು.