ಮೋದಿ ಮುಂದೆ ಗಣಪತಿ ಮಂತ್ರ ಪಠಿಸಿದ ಬಾಲಕರು

×

ಮೋದಿ ಮುಂದೆ ಗಣಪತಿ ಮಂತ್ರ ಪಠಿಸಿದ ಬಾಲಕರು

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ.21)ರಂದು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ಬಾಲಕರ ತಂಡವೊಂದು ಗಣಪತಿ ಪ್ರಾರ್ಥನೆ, ಶಾಂತಿ ಮಂತ್ರವನ್ನು ಹೇಳಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಮೋದಿ ಅವರಯ ಇನ್ಸ್ಟಾಗ್ರಾಮ್​​​​ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸಾಂಸ್ಕೃತಿಕ ಸಂಪರ್ಕವು ನಿಜವಾಗಿಯೂ ಹೃದಯಸ್ಪರ್ಶಿ ಮತ್ತು ಕಾಲಾತೀತವಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ, ನನ್ನ ಯುವ ಸ್ನೇಹಿತರು ಗಣಪತಿ ಪ್ರಾರ್ಥನೆ, ಶಾಂತಿ ಮಂತ್ರ ಮತ್ತು ಇತರ ದೈವಿಕ ಪ್ರಾರ್ಥನೆಗಳನ್ನು ಭಕ್ತಿಯಿಂದ ಹಾಡಿದರು. ಅಂತಹ ಕ್ಷಣಗಳು ನಮ್ಮ ಜನರ ನಡುವಿನ ಶಾಶ್ವತ ಬಾಂಧವ್ಯವನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದ್ದಾರೆ.

Akshay Pallamajalu