ನವದೆಹಲಿ: ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 114 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆಗೈದ ಭಾರತೀಯ ಪ್ಯಾರಾ-ಕ್ರೀಡಾಪಟುಗಳೊಂದಿಗೆ ನವದೆಹಲಿಯಲ್ಲಿ ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಆತ್ಮೀಯ ಹಾಗೂ ಭಾವನಾತ್ಮಕವಾಗಿ ಕಾಲ ಕಳೆದರು. ಈ ಭೇಟಿಯ ವೇಳೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ ತನಿಸಿ ಅಭಿನಂದಿಸಿದರು. ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪ್ರತಿಯೊಬ್ಬ ಕ್ರೀಡಾಪಟುವಿನ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಲ್ಲದೆ, ಖುದ್ದಾಗಿ ಸ್ವತಃ ಸಿಹಿ ತಿನ್ನಿಸುವ ಮೂಲಕ ತಮ್ಮ ಸಂತಸ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು. ಪ್ರಧಾನಿಯವರ ಈ ಸರಳತೆ ಕ್ರೀಡಾಪಟುಗಳಲ್ಲಿ ಭಾರಿ ಉತ್ಸಾಹ ಮೂಡಿಸಿತು.