ಜನಪ್ರಿಯ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ನಟಿ ದಿಶಾ ಮದನ್ ಅವರು ತಮ್ಮ ಗೋವಾ ಪ್ರವಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ವಿವಿಧ ಸ್ಟೈಲಿಶ್ ಹಾಗೂ ಟ್ರೆಂಡಿ ಬಟ್ಟೆಗಳಲ್ಲಿ ಕಾಣಿಸಿಕೊಂಡು ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಪೈಜಾಮಾ ಸೆಟ್‌ನಿಂದ ಹಿಡಿದು ಮಾಡರ್ನ್ ಔಟ್‌ಫಿಟ್‌ಗಳವರೆಗೆ ವಿವಿಧ ಲುಕ್‌ಗಳಲ್ಲಿ ಅವರು ಬಹಳ ಸುಂದರವಾಗಿ ಹೆಜ್ಜೆ ಹಾಕಿದ್ದು, ಅವರ ಈ ಸ್ಟೈಲಿಶ್ ಹಾಗೂ ಕ್ಯೂಟ್ ವಿಡಿಯೋ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. (Source: Disha Madan Instagram)