ನಟ ಪ್ರಭುದೇವ ಅವರು ಯುವ ದಸರಾ ಉದ್ಘಾಟಿಸಲು ಮೈಸೂರಿಗೆ ಆಗಮಿಸಿದ್ದು, ತಮ್ಮ ಬಾಲ್ಯದ ದಸರಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಮೈಸೂರಿಗೆ ಬರುವುದು, ಅರಮನೆ, ಆನೆಗಳು ಮತ್ತು ಚಾಮುಂಡಿ ಬೆಟ್ಟ ವೀಕ್ಷಿಸುವುದು ಅವರಲ್ಲಿ ಸಂತೋಷ ತಂದಿದೆ. ಯುವ ದಸರಾ ಉದ್ಘಾಟಿಸುವ ಅವಕಾಶ ಸಿಕ್ಕಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದು, ತಮ್ಮ ತಾಯಿ ಹಾಗೂ ಕುಟುಂಬ ಸದಸ್ಯರು ದಸರಾಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.