ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ನೀಡಿದ್ದ ಹಳ್ಳಿಗುಗ್ಗು ಹೇಳಿಕೆ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ನಂತರವೂ, ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನನ್ನು ದಲಿತ ಬಲಿತ ಅಂದಾಗ ಯಾರೂ ಯಾಕೆ ಕೇಳಲಿಲ್ಲ? ಹಳ್ಳಿಗುಗ್ಗು ಕೂಡ ಅವರ ರೀತಿ ಪ್ರಶ್ನೆ ಕೇಳಲ್ಲ ಎಂದು ಹೇಳಿದ್ದು. ಗುಗ್ಗು ಎಲ್ಲೇ ಇದ್ದರು ಗುಗ್ಗೆನೇ, ಹಳ್ಳಿ ಅಥವಾ ನಗರ ಆದ್ರೂ ಅಷ್ಟೇ ಎಂದವರು ತಿಳಿಸಿದ್ದಾರೆ.