ರಾಜ್ಯದಲ್ಲಿ ಪಡಿತರ ಚೀಟಿ e-KYC ಪೂರ್ಣಗೊಳಿಸಲು ನವೆಂಬರ್ 10 ಅಂತಿಮ ದಿನವಾಗಿದ್ದು, ಗಡುವು ವಿಸ್ತರಣೆ ಇಲ್ಲ. 41.33 ಲಕ್ಷ ಫಲಾನುಭವಿಗಳು ಇನ್ನೂ e-KYC ಮಾಡಿಸಿಲ್ಲ. ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಅಥವಾ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎಂದು ಆಹಾರ ಇಲಾಖೆ ಎಚ್ಚರಿಸಿದೆ.