ತಿಪಟೂರಿನಲ್ಲಿ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

×

ತಿಪಟೂರಿನಲ್ಲಿ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದ ದುರ್ಘಟನೆಯಲ್ಲಿ, ಬೈಕ್‌ನಲ್ಲಿ ತೆರಳುತ್ತಿದ್ದ 65 ವರ್ಷದ ನಿವೃತ್ತ ಶಿಕ್ಷಕ ಶಿವಸ್ವಾಮಿ ಅವರು ಮರದ ಕೊಂಬೆ ಮುರಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲ್ಪತರು ಕಾಲೇಜು ಬಳಿ ಈ ಘಟನೆ ನಡೆದಿದ್ದು, ತಿಪಟೂರಿನಿಂದ ಸ್ವಗ್ರಾಮ ಸುಗೂರಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕೆಲವು ದಿನಗಳಿಂದ ಮರ ಜಗ್ಗಿನಿತು ನಿಂತಿದ್ದರೂ ತೆರವು ಮಾಡಿರಲಿಲ್ಲ.

 

 

 

 

Akshay Pallamajalu