ಬಾಲಿವುಡ್ ಫಿಟ್‌ನೆಸ್ ಕ್ವೀನ್ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಯೋಗ ವೀಡಿಯೊ ಸಖತ್ ವೈರಲ್ ಆಗಿದೆ. ಯೋಗ ಮ್ಯಾಟ್ ಮೇಲೆ ಕುಳಿತು ಅತ್ಯಂತ ಸರಾಗವಾಗಿ ತಮ್ಮ ಕಾಲನ್ನು ತಲೆಯ ಹಿಂಭಾಗಕ್ಕೆ ಚಾಚಿ ಯೋಗಾಸನ ಮಾಡುವ ಮೂಲಕ ಶಿಲ್ಪಾ ಶೆಟ್ಟಿ ತಮ್ಮ ಫ್ಲೆಕ್ಸಿಬಿಲಿಟಿ ಪ್ರದರ್ಶಿಸಿದ್ದು, ಅವರ ದೈಹಿಕ ಸಾಮರ್ಥ್ಯಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ. (Source: Shilpa Shetty Instagram)