ಗುಜರಾತ್ನ ವಡೋದರಾ ನಗರದ ಬಾಜವಾ ಗ್ರಾಮದಲ್ಲಿ ಬೀದಿ ಹಸುಗಳ ಹಾವಳಿ ಮಿತಿಮೀರಿದ್ದು, ತನ್ನ ಸಣ್ಣ ಮಗನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ತಾಯಿಯ ಮೇಲೆ ಉಗ್ರ ರೂಪ ತಾಳಿದ ಹಸುವೊಂದು ಭೀಕರ ದಾಳಿ ನಡೆಸಿದೆ. ಈ ಆಘಾತಕಾರಿ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಾಯಿಯೊಬ್ಬರು ತಮ್ಮ ಸಣ್ಣ ಮಗನ ಕೈ ಹಿಡಿದುಕೊಂಡು ನಡೆದು ಹೋಗುತ್ತಿದ್ದರು. ಈ ವೇಳೆ ಹಸುವೊಂದು ಇದ್ದಕ್ಕಿದ್ದಂತೆ ಉಗ್ರಗೊಂಡು ಇಬ್ಬರ ಮೇಲೂ ಭೀಕರವಾಗಿ ಎರಗಿದೆ.