ಮಸ್ಕತ್, ನವೆಂಬರ್ 17: ಜಾಗತಿಕ ತೈಲ ಸಾಗಣೆಯ ಅತ್ಯಂತ ನಿರ್ಣಾಯಕ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಒಮಾನ್ನ ಖಸಾಬ್ ಕರಾವಳಿಯ ಸಮೀಪ ಟ್ಯಾಂಕರ್ ಹಡಗೊಂದರ ಮೇಲೆ 2 ಬಾರಿ ದಾಳಿ ನಡೆದಿದೆ. ಈ ಘಟನೆಯ ನಂತರ ಹಡಗಿನಲ್ಲಿದ್ದ ಸಿಬ್ಬಂದಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ದಾಳಿಯ ತೀವ್ರತೆಗೆ ಹಡಗಿಗೆ ಹಾನಿಯಾಗಿದ್ದು, ಸಿಬ್ಬಂದಿ ಸಂಪರ್ಕಕ್ಕೆ ಸಿಗುತ್ತಿಲ್ಲ.