ಅಮೆರಿಕದ ಟೆಕ್ಸಾಸ್ ಸಂಸತ್ ಚುನಾವಣಾ ಪ್ರಚಾರದ ಕಣದಲ್ಲಿ ಈಗ ದಕ್ಷಿಣ ಭಾರತೀಯ ಮೂಲದ ಖಾದ್ಯ 'ಮಸಾಲ ದೋಸೆ'ಯದ್ದೇ ಮಾತು. ಡೆಮಾಕ್ರಟಿಕ್ ಪಕ್ಷದ ಪ್ರಮುಖ ಅಭ್ಯರ್ಥಿ ಜೇಮ್ಸ್ ತಲಾರಿಕೊ ತಮ್ಮ ಚುನಾವಣಾ ಪ್ರಚಾರದ ವೇಳೆ ಸ್ವತಃ ತಾವೇ ನಿಂತು ಬಿಸಿಬಿಸಿ ಮಸಾಲ ದೋಸೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.