ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಪ್ರದೇಶದಲ್ಲಿ ಕುರುಕಲು ತಿಂಡಿ ಪ್ಯಾಕೆಟ್ನಲ್ಲಿದ್ದ ಆಟಿಕೆ ವಸ್ತುವೊಂದು ಗಂಟಲಲ್ಲಿ ಸಿಲುಕಿ 4 ವರ್ಷದ ಬಾಲಕಿ ಅಲಿಯಾ ಶೇಕ್ ದಾರುಣವಾಗಿ ಸಾವಿಗೀಡಾಗಿದ್ದಾಳೆ. ಅಂಗಡಿಯಿಂದ ಖರೀದಿಸಿದ ಮೋಟುಪಟ್ಲು ಕುರುಕುರೆ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ ಅಸ್ವಸ್ಥಗೊಂಡ ಬಾಲಕಿಯನ್ನು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಮನೆಗೆ ಮರಳುವಾಗ ಮತ್ತೆ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.