ಭಾಗ್ಯದ ಲಕ್ಷ್ಮಿ ಬಾರಮ್ಮ, ಹಳೆಯ ಅನಂತ್ ನಾಗ್ ನೆನಪು

×

ಭಾಗ್ಯದ ಲಕ್ಷ್ಮಿ ಬಾರಮ್ಮ, ಹಳೆಯ ಅನಂತ್ ನಾಗ್ ನೆನಪು

ಸಿನಿಮಾ ಲೋಕದಲ್ಲಿ ಮಾಡಿರುವ ಸಾಧನೆಗೆ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.  ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹಿರಿಯ ನಟ ಡಾ ಅನಂತ್ ನಾಗ್ ಅವರು ವೇದಿಕೆಯಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿದ್ದಾರೆ. ಈ ವಿಡಿಯೋವನ್ನು sukanyasampath ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವೇದಿಕೆಯನ್ನು ಇಂದಿಗೆ ನಾನು ನಿರ್ವಹಿಸಿದ್ದು ಕನ್ನಡತಿಯಾಗಿ ನನಗೆ ಹೆಮ್ಮೆ ಪಡುವ ಹೃದಯದ ಕ್ಷಣ! ಡಾ ಅನಂತ್ ನಾಗ್ ಸರ್ ವೇದಿಕೆಯಲ್ಲಿ ಹಾಡಿದ ಪರಿ ನೋಡಿ ಎಂದು ಬರೆದುಕೊಂಡಿದ್ದು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದೆ.

Sainandha P