ಕಳೆದ 17 ವರ್ಷಗಳಿಂದ ಒಂದೂ ಕಪ್ ಗೆದ್ದಿಲ್ಲವಾದ್ರೂ, ನಿಷ್ಠಾವಂತ ಅಭಿಮಾನಿಗಳನ್ನು ಸಂಪಾದಿಸಿರುವ ಏಕೈಕ ತಂಡ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB). ಈ ಅಭಿಮಾನ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ ಈ ವಿಡಿಯೋದಲ್ಲಿದೆ. ಶ್ವಾನವೊಂದು RCB ಜರ್ಸಿ ತೊಟ್ಟು ಕ್ರಿಕೆಟ್ ವೀಕ್ಷಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. barata.bhavya ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.