ಕರ್ನಾಟಕ ತಮಿಳುನಾಡು ಗಡಿ, ಚಾಮರಾಜನಗರ ಜಿಲ್ಲೆಯ ಆಸನೂರು ಬಳಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಯೊಂದು ಚೆಕ್ಪೋಸ್ಟ್ ಬಳಿ ಲಾರಿ ಅಡ್ಡಗಟ್ಟಿ ಲಾರಿಯಲ್ಲಿದ್ದ ಕಬ್ಬು ಸೊಂಡಿಲಿಂದ ತೆಗೆದು ಓಡಿದೆ. ಮತ್ತೊಂದೆಡೆ, ಮುಖ್ಯರಸ್ತೆಯಲ್ಲಿ ಎರಡು ಕಾಡಾನೆ ಸಂಚಾರದಿಂದ ಸವಾರರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ಉಪಟಳದ ದೃಶ್ಯ ಸವಾರರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.