ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರು ಅರಮನೆಯಲ್ಲಿ ಚಾಲನೆ ದೊರೆತಿದೆ. ರಾಜವಂಶಸ್ಥ ಯದುವೀರ ಒಡೆಯರ್ ಅವರು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಖಾಸಗಿ ದರ್ಬಾರ್ ನಡೆಸಿದರು. ಕಳಸ ಪೂಜೆ, ನವಗ್ರಹ ಪೂಜೆ ಸಲ್ಲಿಸಿ, ರಾಜಗಾಂಭೀರ್ಯದೊಂದಿಗೆ ಚಿನ್ನದ ಸಿಂಹಾಸನವನ್ನು ಅಲಂಕರಿಸುವ ಮೂಲಕ ಪರಂಪರೆಯನ್ನು ಮುಂದುವರಿಸಿದರು.