ನಟಿ ಅಮೂಲ್ಯಗೆ ಬರ್ತ್​ಡೇ ಸಂಭ್ರಮ; ಕಂಬ್ಯಾಕ್ ಯಾವಾಗ?

14-Sep 2023

Pic credit - Instagram

ಇಂದು (ಸೆಪ್ಟೆಂಬರ್ 14) ನಟಿ ಅಮೂಲ್ಯ ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಬರುತ್ತಿದೆ.

ಅಮೂಲ್ಯ ಬರ್ತ್​ಡೇ

ಅಮೂಲ್ಯಗೆ ಈಗ ಅವಳಿ ಮಕ್ಕಳು. ಕುಟುಂಬದ ಜೊತೆ ಅವರು ಹಾಯಾಗಿ ಸಮಯ ಕಳೆಯುತ್ತಿದೆ. ಹೀಗಾಗಿ ಬರ್ತ್​ಡೇ ಖುಷಿ ಹೆಚ್ಚಿದೆ.

ಸಖತ್ ಖುಷಿ

ಬಾಲ ನಟಿಯಾಗಿ ಅಮೂಲ್ಯ ಅವರು ಚಿತ್ರರಂಗಕ್ಕೆ ಕಾಲಿಟ್ಟವರು. ಹಲವು ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ.

ಬಾಲ ನಟಿ

ಅಮೂಲ್ಯ ನಾಯಕಿ ಆಗಿ ನಟಿಸಿದ ಮೊದಲ ಸಿನಿಮಾ ‘ಚೆಲುವಿನ ಚಿತ್ತಾರ’ ಈ ಚಿತ್ರದಿಂದ ಅವರಿಗೆ ಸಖತ್ ಖ್ಯಾತಿ ಸಿಕ್ಕಿತು.

ಸಿಕ್ಕಿತು ಖ್ಯಾತಿ

ಗಣೇಶ್ ಹಾಗೂ ಅಮೂಲ್ಯ ಅವರದ್ದು ಫೇವರಿಟ್ ಕಾಂಬಿನೇಷನ್ ಎನಿಸಿಕೊಂಡಿದೆ. ಇವರು ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಗಣೇಶ್ ಕಾಂಬಿನೇಷನ್

ಗಣೇಶ್ ನಟನೆಯ ‘ಮುಗುಳು ನಗೆ’ ಚಿತ್ರದಲ್ಲಿ ಅಮೂಲ್ಯ ಅತಿಥಿ ಪಾತ್ರ ಮಾಡಿದರು. ಈ ಸಿನಿಮಾ 2017ರಲ್ಲಿ ರಿಲೀಸ್ ಆಯಿತು.

ಮುಗುಳು ನಗೆ

ಅಮೂಲ್ಯ ಅವರು ಶೀಘ್ರವೇ ನಟನೆಗೆ ಕಂಬ್ಯಾಕ್ ಮಾಡುತ್ತಾರೆ ಎನ್ನಲಾಗಿದೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ಕಂಬ್ಯಾಕ್ ಯಾವಾಗ?

ದೊಡ್ಡ ಆಫರ್ ಗಿಟ್ಟಿಸಿಕೊಂಡ ತ್ರಿಶಾ ಕೃಷ್ಣನ್