ಸೂರ್ಯನ ಶಕ್ತಿ ಸ್ಫೋಟ ಸೆರೆ ಹಿಡಿದ ಆದಿತ್ಯ L1

08-11-2023

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಅಧ್ಯಯನ ನಡೆಸಿದ ಇಸ್ರೋ, ಸೂರ್ಯನ ಅಧ್ಯಯನಕ್ಕೆ ಆದಿತ್ಯ  L1 ನೌಕೆಯನ್ನು ಕಳಿಸಿದೆ. ಇದೀಗ ಈ ಆದಿತ್ಯ  L1 ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ.  

ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್‌ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಪ್ಲೇಲೋಡ್ ಸೂರ್ಯ ಮೇಲ್ಮೈನಲ್ಲಿ ನಡೆಯುವ ಸೌರ ಜ್ವಾಲೆಗಳ ಸ್ಫೋಟವನ್ನು ಸೆರೆ ಹಿಡಿದಿದೆ. 

ಸೂರ್ಯ ಮೇಲ್ಮೈನಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕರಣವನ್ನು ಹೊರಸೂಸುತ್ತದೆ. ಈ ವೇಳೆ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗಳನ್ನು ಆದಿತ್ಯ ಎಲ್1 ದಾಖಲಿಸಿದೆ.

ಸೂರ್ಯನ ಸುತ್ತಲಿನ ವಾತಾವರಣವರದಲ್ಲಿ ಸಂಗ್ರಹವಾಗಿರುವ ಕಾಂತೀಯ ಶಕ್ತಿ ಬಿಡುಗಡೆ ವೇಳೆ ಸ್ಫೋಟಗಳು ಸಂಭವಿಸುತ್ತದೆ. ಈ ಪೈಕೆ ಕೆಲವು ತೀವ್ರ ಸ್ಫೋಟವಾಗಿದ್ದರೆ, ಕೆಲವು ಸಾಮಾನ್ಯವಾಗಿರುತ್ತದೆ. ಈ ಸ್ಫೋಟದ ತೀವ್ರತೆಯನ್ನೂ ಉಪಗ್ರಹ ದಾಖಲಿಸಿದೆ.

ಎಚ್​ಇಎಲ್​1ಒಎಸ್​ ಪೇಲೋಡ್​ ಅನ್ನು ಬೆಂಗಳೂರಿನ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ಬಾಹ್ಯಾಕಾಶ ಖಗೋಳವಿಜ್ಞಾನ ಗುಂಪು ಅಭಿವೃದ್ಧಿಪಡಿಸಿದೆ. 

ಸೂರ್ಯನಿಂದ ಹೆಚ್ಚಿನ ಶಕ್ತಿಯ ಎಕ್ಸ್-ರೇ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಎಚ್​ಇಎಲ್​1ಒಎಸ್​ ಪೇಲೋಡ್​ ಅನ್ನು ವಿನ್ಯಾಸಗೊಳಿಸಲಾಗಿದೆ. 

ಸೆಪ್ಟೆಂಬರ್ 9 ರಂದು ಆದಿತ್ಯ ಎಲ್ 1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಆದಿತ್ಯ ಎಲ್ 1 ನೌಕೆ ಹಾರಿಸಲಾಗಿತ್ತು.

ಇದು ಭಾರತದ ಮೊದಲ ಸಮರ್ಪಿತ ಸೌರ ವೀಕ್ಷಣಾಲಯ ವರ್ಗದ ಮಿಷನ್ ಆಗಿದೆ. ಸೂರ್ಯನ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಿರುವ ಏಳು ವಿವಿಧ ಪೇಲೋಡ್​ಗಳನ್ನು ನೌಕೆ ಹೊತ್ತೊಯ್ದಿದೆ.

ಮಿಲನಾ ನಾಗರಾಜ್ ಪಾಲಿಗೆ 2023 ತುಂಬಾನೇ ವಿಶೇಷ