ರಾಮಲಲ್ಲಾ ವೇಷಭೂಷಣದಲ್ಲಿ ಬೆಂಗಳೂರಿನ 18 ತಿಂಗಳ ಪುಟ್ಟ ಕಂದ

20  Jan 2024

Author: Akshatha Vorkady

ರಾಮನ ನಗರಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಅದ್ಧೂರಿ ಸಿದ್ಧತೆ ಭರದಿಂದ ಸಾಗುತ್ತಿದೆ.

ಇಡೀ ದೇಶದಲ್ಲಿ ಈಗ ಎಲ್ಲೆಲ್ಲೂ ರಾಮ...ರಾಮ ಎಂಬ ಎರಡಕ್ಷರದೇ ಜಪದಲ್ಲಿದ್ದು, ರಾಮೋತ್ಸವದ ಸಂಭ್ರಮದಲ್ಲಿದೆ. 

ಇದೀಗಾ 18 ತಿಂಗಳ ಪುಟ್ಟ ಕಂದಮ್ಮನಿಗೆ ಶ್ರೀರಾಮನ ವೇಷಭೂಷಣ ತೊಡಿಸಿ, ಫೋಟೋಶೂಟ್​ ಮಾಡಿಸಿದ್ದಾರೆ. 

ಹಣೆಯ ಮೇಲೆ ತಿಲಕ, ಕೈಯಲ್ಲಿ ಬಿಲ್ಲು ಬಾಣವನ್ನು ಹಿಡಿದು ಕಣ್ಮನ ಸೆಳೆದ ಈ ರಾಮಲಲ್ಲಾ ಹೇಗಿದ್ದಾನೆ ನೋಡಿ

ಬೆಂಗಳೂರಿನ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯ ನಿವಾಸಿಗಳಾದ ದಿಲೀಪ್ ಕುಮಾರ್  ಹಾಗೂ ಅರುಣಾ ಶಿರಗುಪ್ಪಿ ಪುತ್ರ ಲಿಶಾನ್ ಡಿ ಜೈನ್(18ತಿಂಗಳು)

ಶ್ರೀರಾಮನ ಸರಳ ವ್ಯಕ್ತಿತ್ವ, ಲೋಕಕಲ್ಯಾಣಕ್ಕಾಗಿ ಜೀವಿಸಿದ್ದ ಬಗೆ ಈ ಪುಟ್ಟ ಕಂದ ಸಹ ಅಳವಡಿಸಿಕೊಳ್ಳಲಿ ಎಂಬ ಸದ್ದುದ್ದೇಶದಿಂದ ವೇಷಭೂಷಣ.

ಈ ರಾಮಲಲ್ಲಾನ ಅದ್ಬುತ ಪೋಟೋಗಳನ್ನು ವಿದ್ಯಾರಣ್ಯಪುರದ ಫ್ಯಾಷನ್ ಫಿಕ್ಸ್ಲೆನ್ಸ್ ಇವೆಂಟ್ ನಲ್ಲಿ ಸೆರೆಹಿಡಿಯಲಾಗಿದೆ.