ಭಾರತದಲ್ಲಿ ಐಫೋನ್ 15 ಸರಣಿ ಎಷ್ಟು ಗಂಟೆಗೆ ಲಾಂಚ್?

12-09-2023

ಇಂದು ನಡೆಯಲಿರುವ ಆ್ಯಪಲ್‌ನ ‘ವಂಡರ್‌ಲಸ್ಟ್’ ಈವೆಂಟ್​ನಲ್ಲಿ ಐಫೋನ್ 15 ಸರಣಿಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲಿದೆ.

ಐಫೋನ್ 15 ಸರಣಿ ಲಾಂಚ್

ಭಾರತದಲ್ಲಿ ಈ ಈವೆಂಟ್ ರಾತ್ರಿ 10:30 ಕ್ಕೆ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮದ ಲೈವ್ ಆ್ಯಪಲ್​ನ ಅಧಿಕೃತ ಯೂಟ್ಯೂಬ್ ಚಾನಲ್​ನಲ್ಲಿ ವೀಕ್ಷಿಸಬಹುದು.

ಎಷ್ಟು ಗಂಟೆಗೆ?

ಐಫೋನ್ 15 ಸರಣಿಯಲ್ಲಿ ಐಫೋನ್ 15, ಐಫೋನ್ 15 ಪ್ಲಸ್, 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ 4 ಫೋನುಗಳು ಇರಲಿದೆ.

ಒಟ್ಟು ನಾಲ್ಕು ಫೋನ್

ಇಂದು ಬಿಡುಗಡೆ ಆಗಲಿರುವ ಐಫೋನ್ 15 ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಯುಎಸ್‌ಬಿ ಪೋರ್ಟ್

ವರದಿಗಳ ಪ್ರಕಾರ, ಐಫೋನ್ 15 ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೆಚ್ಚು ಸುಧಾರಿಸಿದೆ. ವಿಶೇಷವಾಗಿ ಕಡಿಮೆ-ಬೆಳಕಿನಲ್ಲಿ ಉತ್ತಮ ಫೋಟೋ ಸೆರೆ ಹಿಡಿಯುತ್ತಂತೆ.

ಕ್ಯಾಮೆರಾ

ಐಫೋನ್ 14 ಮತ್ತು ಹಿಂದಿನ ಎಲ್ಲಾ ಐಫೋನ್ ಮಾದರಿಗಳಂತೆಯೇ ಐಫೋನ್ 15 6.1-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ ಪ್ಲೇಯನ್ನು ಹೊಂದಿರುತ್ತದೆ.

ಡಿಸ್ ಪ್ಲೇ

ಈ ವರ್ಷದ ಐಫೋನ್ ಕಳೆದ ವರ್ಷದ A16 ಬಯೋನಿಕ್ ಚಿಪ್‌ಸೆಟ್ ಅನ್ನು ಬಳಸುತ್ತದೆ. ಇದು ಐಫೋನ್ 14 ಗಿಂತ ಬೃಹತ್ ಅಪ್‌ಗ್ರೇಡ್ ಆಗಿರುತ್ತದೆ.

ಚಿಪ್‌ಸೆಟ್

ಆ್ಯಪಲ್ ಐಫೋನ್ 15 ಬೆಲೆಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಕೆಲವು ಸಾವಿರ ರೂಪಾಯಿಗಳಷ್ಟು ಹೆಚ್ಚಿಸಬಹುದು. ಇದರ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ.

ಬೆಲೆ ಎಷ್ಟಿರಬಹುದು?

ನೋಕಿಯಾದ ಈ ಸ್ಟೈಲಿಶ್ ಫೋನ್'ಗೆ ಫಿದಾ ಆದ ಗ್ರಾಹಕರು