ಭಾರತ-ಬಾಂಗ್ಲಾ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳು ನೋಡಿ
16 September 2023
Pic credit - Google
ಏಷ್ಯಾಕಪ್ 2023 ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ 6 ರನ್'ಗಳ ರೋಚಕ ಜಯ ಸಾಧಿಸಿತು.
ಭಾರತ-ಬಾಂಗ್ಲಾ
Pic credit - Google
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣ ಆಗಿವೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಹಲವು ದಾಖಲೆ
Pic credit - Google
ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ದಾಖಲೆ ಬರೆದರು. ಜಡೇಜಾ ಈ ಸಾಧನೆ ಮಾಡಿದ 7ನೇ ಭಾರತೀಯರಾಗಿದ್ದಾರೆ.
ಜಡೇಜಾ 200 ವಿಕೆಟ್
Pic credit - Google
ಬಾಂಗ್ಲಾ ವಿರುದ್ಧ ಶತಕ ಸಿಡಿಸುವ ಮೂಲಕ ಗಿಲ್ ಏಕದಿನದಲ್ಲಿ 1000 ರನ್ ಪೂರೈಸಿದರು (17 ಇನ್ನಿಂಗ್ಸ್‌ಗಳಲ್ಲಿ). ಇವರನ್ನು ಬಿಟ್ಟರೆ ಈ ವರ್ಷ ಯಾವುದೇ ಬ್ಯಾಟರ್ 1000 ರನ್ ಗಳಿಸಿಲ್ಲ.
ಗಿಲ್ 1000 ರನ್
Pic credit - Google
ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ ಗಿಲ್ ಅವರ ಆರನೇ ಶತಕ ಇದಾಗಿದ್ದು, ಟಿ20 ಹಾಗೂ ಟೆಸ್ಟ್‌ನಲ್ಲಿಯೂ ಗಿಲ್ ತಲಾ ಒಂದು ಶತಕ ಸಿಡಿಸಿದ್ದಾರೆ.
ಆರನೇ ಶತಕ
Pic credit - Google
ರೋಹಿತ್ ಶರ್ಮಾ ಅವರು ಬಾಂಗ್ಲಾ ವಿರುದ್ಧದ ಈ ಪಂದ್ಯದಲ್ಲಿ 200 ಕ್ಯಾಚ್ಗಳನ್ನು ಪೂರೈಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಐದನೇ ಭಾರತೀಯನಾಗಿದ್ದಾರೆ.
ರೋಹಿತ್ 200 ಕ್ಯಾಚ್
Pic credit - Google
ಏಷ್ಯಾಕಪ್ ಇತಿಹಾಸದಲ್ಲೇ ಬರೋಬ್ಬರಿ 11 ವರ್ಷಗಳ ನಂತರ ಬಾಂಗ್ಲಾದೇಶ ಕ್ರಿಕೆಟ್ ತಂಡ ಮೊದಲ ಬಾರಿಗೆ ಭಾರತವನ್ನು ಸೋಲಿಸಿದ ಸಾಧನೆ ಮಾಡಿತು.
ಬಾಂಗ್ಲಾ ಸಾಧನೆ
Pic credit - Google
ಭಾರತ-ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯ ಯಾವಾಗ?
ಇನ್ನಷ್ಟು ಓದಿ